ಪೋಸ್ಟ್‌ಗಳು

“ಬೇಸಿಗೆ ರಜೆಯಿಂದ ಶಾಲೆಯ ಮಡಿಲಿಗೆ"

ಇಮೇಜ್
ಆತ್ಮೀಯರೇ ಬೇಸಿಗೆ ಇನ್ನೇನು ಕಳೆಯುತ್ತಿದೆ , ರಜೆಯ ಅಮಲಿನಲ್ಲಿದ್ದ ಶಾಲಾ ಮಕ್ಕಳು ಮತ್ತು ಪೋಷಕರಿಗೆ ಶಾಲೆ ಪುನರಾರಂಭದ್ದೇ ಚಿಂತೆ. ಶಾಲಾ ಪೋಷಾಕು ಮತ್ತು ಪರಿಕರಗಳನ್ನು ಜೋಡಿಸುವತ್ತಾ ಸಮರೋಪಾದಿಯಲ್ಲಿ ಸಿದ್ಧತೆ ನಡೆದಿದೆ 🙏 ಕಳೆದ ವರ್ಷ ಬರೆದ ಕವನವೊಂದನ್ನು ಸಂಧರ್ಭಕ್ಕೆ ತಕ್ಕಂತೆ ಸ್ವಲ್ಪ ಮಾರ್ಪಾಡುಗೊಳಿಸಿ ಹಂಚಿಕೊಳ್ಳುತ್ತಿರುವೆ. “ಬೇಸಿಗೆ ರಜೆಯಿಂದ ಶಾಲೆಯ ಮಡಿಲಿಗೆ" ಚುನಾವಣಾ ಪ್ರಹಸನವೂ ಮುಗಿಯಿತು 🤔 ಐಪಿಎಲ್ ಪಂದ್ಯಾವಳಿಯೂ ಮರೆಯಾಯಿತು 🏆 ಇವುಗಳ ನಡುವೆ ಬೇಸಿಗೆ ರಜೆಯೂ ಕಳೆಯಿತು 🌚 ಆ ಪ್ರವಾಸಗಳೂ , ಬೇಸಿಗೆ ಶಿಬಿರದ ಆ ಸಾಹಸಗಳು 🕺 ಅಜ್ಜಿಯ ಮನೆಗೆ ಹೋದ ಮೋಜಿನ ದಿನಗಳು 💃 ನೆನಪುಗಳೇ ಇನ್ನು ಎಲ್ಲಾ ಬರೀ ನೆನಪುಗಳು 🤔 ಕಾಡಲಿದೆ ಮರೆತೇ ಹೋದಂತಿದ್ದ ಕ್ರೂರ ಅಲಾರಾಂ ಸದ್ದು ⏰ ತಯಾರಾಗಬೇಕಿದೆ ಮುಂಜಾವು ಸೂರ್ಯನ ಜೊತೆಗೆದ್ದು 🌞 ತಲುಪಬೇಕಿದೆ ಶಾಲೆಯನ್ನು ಮತ್ತೊಮ್ಮೆ ಎದ್ದು ಬಿದ್ದು 🏃 🚶‍♀️ ಅಮ್ಮಂದಿರ ದಿನ ಇನ್ನು ಮತ್ತಷ್ಟು ಉದ್ದಾ 👩 ರಾತ್ರಿಯ ನಿದ್ದೆಯಂತೂ ಮಗದಷ್ಟು ಗಿಡ್ದಾ 🤡 ಮಾಡಲೇಬೇಕಿದೆ ಕಾಲನೊಂದಿಗೆ ಮರಳಿ ಮಹಾಯುದ್ಧ ⌛️ ಶಾಲೆಗೇ ಹೊರಡಿ ಮಕ್ಕಳೇ,ಶಾಲೆಗೇ ಹೊರಡಿ 👍 ವಿದ್ಯೆ ಕಲಿಯಲು, ಭವ್ಯ ಭವಿಷ್ಯ ಕಟ್ಟಿಕೊಳ್ಳಲು 😇 ರಜೆ ಸುಂದರ, ಆದರದಕ್ಕಿಂತಾ ಶಿಕ್ಷಣ ಅದ್ಭುತ 🙏 ಶುಭವಾಗಲಿ 🙏 ನಿಮ್ಮ ಕಲಿಕೆ ಅರಿವಿನದ್ದಾಗಿರಲೀ 😇 ಕೆ 🌈 ಬಿ 🌈 ಬಿ 🌈 (ಕಾಮನ

"ನಾಚಿಕೆ"😊😊

ಇಮೇಜ್
ನಮಸ್ಕಾರ ನನಗಂತೂ ಶುಕ್ರವಾರಸಂಜೆ ಇರೋ ರೋಮಾಂಚನ ಭಾನುವಾರ ಸಂಜೆ ಇರೋಲ್ಲಾ 😀 ವಾರದ ದುಡಿಮೆಗೆ ಎರಡು ದಿನ ವಿರಾಮಕ್ಕೆ ಮುನ್ನುಡಿ ಈ ಸಂಜೆ ಒಂದು ಶೃಂಗಾರದ ಹನಿಯೊಂದಿಗೆ ಸ್ವಾಗತ ಮಾಡುತ್ತಾ ಹಂಚಿಕೊಳ್ಳುತ್ತಿರುವೆ "ನಾಚಿಕೆ" 😊 😊 ನನ್ನಕ್ಕನ 💃 ಆ ಭಾವನೆಗೆ ನನ್ನ ಭಾವನೇ 👨🏻 ಕಾರಣ ...!!!

"ಅನ್ವೇಷಣೆ"

ಗೆಳೆಯರೇ ಬಹುಶಃ ಜೀವನವೇ ಹೀಗೆ, ಯಾವುದೋ ಸಮಸ್ಯೆ ಯಾವುದಕ್ಕೋ ಪರಿಹಾರ, ಯಾವುದೋ ಪ್ರಶ್ನೆ ಯಾವುದಕ್ಕೋ ಉತ್ತರವಾಗಿ ಬಿಡುತ್ತದೆ ಇಂದು ಏಕಾಂತದ ಮಿತ್ರನೊಂದಿಗೆ ಸಂಭಾಷಣೆ ನಡೆಸುವ ಅವಕಾಶ ಸಿಕ್ಕಿಬಿಟ್ಟಿತು. ಮಾತಿಗೆ ಮಾತು ಬೆಳೆಯುತ್ತಾ ನನ್ನೊಳಗೆ ಶೂನ್ಯ ತುಂಬಿದ ಭಾವನೆ...ಛಲಬಿಡದ ತಿವಿಕ್ರಮನಂತೆ ಶೂನ್ಯದೊಂದಿಗೆ ಸೆಣಸಾಡುತ್ತಾ ನನ್ನೊಳಗೆ ಅಡಗಿರಬಹುದಾದ ಸತ್ಯದ ಅನ್ವೇಷಣೆಯ ಪ್ರಯತ್ನದ ಫಲವೇ ಈ ಸಾಹಿತ್ಯ , ಬಹುಶಃ ಇದು ಸಾಹಿತ್ಯವಲ್ಲಾ ನಮ್ಮೆಲ್ಲರೊಳಗೆ ಹುದುಗಿರುವ ಆದ್ಯಾತ್ಮದ ಒಂದು ಸಣ್ಣ ಹನಿ ಲೈಕ್ ಮಾಡಿ ಶೇರ್ ಮಾಡಿ ಎಂದು ಈ ಬಾರಿ ಯಾವುದೇ ಬೇಡಿಕೆಯನ್ನಿಡದೆ ಈ ಅನ್ವೇಷಣೆಯನ್ನು ಒಂದಲ್ಲಾ ಎರಡು ಬಾರಿ ಓದಿ ಪೂರ್ಣವಾಗಿ ಅರಿತು ಸ್ವಗತದಲ್ಲಿ ಎಂಬಂತೆ ಅಭಿಪ್ರಾಯ ವ್ಯಕ್ತ ಪಡಿಸಿದರೆ ಅಷ್ಟು ಸಾಕೇನೋ ? ಯಾರಿಗೆ ಗೊತ್ತು...!!! "ಅನ್ವೇಷಣೆ" ನನ್ನ ಬಲ್ಲವರಿಗೆ ನಾ ಪರಿಚಿತ ತುಂಬಾ ಹತ್ತಿರದಿಂದ ಅರಿತವರಿಗೆ ನಾ ಚಿರಪರಿಚಿತ ನನ್ನ ನಾ ಬಲ್ಲ ಹೊರಟರೆ ಅಡಗಿದ್ದಾನೆ ನನ್ನೊಳಗೊಬ್ಬ ಆಗಂತುಕ ತುಂಬಾ ಆಳಕ್ಕೆ ಇಳಿದಷ್ಟೂ ನನಗೇ ನಾ ಅಪರಿಚಿತ ಹಾರಿ ಹೋಗಿ ಬಿಡಲೇ..??? ನನ್ನಿಂದ ನಾ ಕಳೆದುಹೋಗುವ ಮುನ್ನಾ ಬಾನು ಸೇರಿ ಬಿಡಲೇ...??? ಗೂಡು ಪಂಜರವಾಗುವ ಮುನ್ನಾ ಸಂಬಂಧಗಳಿಂದ ನಿರೀಕ್ಷೆ ನನಗೇಕೆ ? ಬಂಧಗಳ ಬೆಸುಗೆಯ ಹಂಗೇಕೆ ? ಗರಿಗೆದರ ಹೋದರೆ ಅರಿವಾಗುತ್ತಿದೆ ಒಂದೊಂದು ಗರಿಗೂ ಒಂದೊಂದು ಸಂಬಂಧ ..

Modave...!!!

ಇಮೇಜ್
ಮೊಡವೆ ಬರುವುದು ಹದಿಹರಯದ ನಡುವೆ :-) ಮುದುಕರಿಗಿಲ್ಲ ಇದರ ಗೊಡವೆ . . . !!!

Kharchu

ಇಮೇಜ್
ಖರ್ಚು   ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ Kharch Hendatiyobbalu Maneyolagiddare Nanagadu Koti roopayi

Baduku

ಇಮೇಜ್
ಬದುಕು ಅಗೆದಸ್ಟೂ ಆಳ ಅರ್ಥವದಸ್ಟೂ ನಿಗೂಢ  Agedastoo aala Arthavadastoo nigoodha